Close Menu
BB News Kannada
    Facebook X (Twitter) Instagram
    Monday, March 9
    Facebook X (Twitter) Instagram
    ಸಂಪರ್ಕಿಸಿ
    • ಮುಖಪುಟ
    • ತಾಜಾ ಸುದ್ದಿ
    • ಜಿಲ್ಲೆ
    • ರಾಷ್ಟ್ರೀಯ
    • ಅಂತರರಾಷ್ಟ್ರೀಯ
    • ರಾಜಕೀಯ
    • ಚಿತ್ರರಂಗ
    • ಅಪರಾಧ
    • ಕ್ರೀಡೆ
    BB News Kannada
    Home»Politics»ಪ್ರಜಾಪ್ರಭುತ್ವದ ಧ್ವನಿಗೆ ಧಕ್ಕೆಯೇ? ದ್ವೇಷ ಭಾಷಣ ಮಸೂದೆಯ ವಿರುದ್ಧ ರಾಜ್ಯಪಾಲರ ಎಚ್ಚರಿಕೆ
    Politics

    ಪ್ರಜಾಪ್ರಭುತ್ವದ ಧ್ವನಿಗೆ ಧಕ್ಕೆಯೇ? ದ್ವೇಷ ಭಾಷಣ ಮಸೂದೆಯ ವಿರುದ್ಧ ರಾಜ್ಯಪಾಲರ ಎಚ್ಚರಿಕೆ

    yogeeshBy yogeeshFebruary 9, 2026No Comments1 Min Read
    Facebook Twitter LinkedIn Telegram Pinterest Tumblr Reddit WhatsApp Email
    Share
    Facebook Twitter LinkedIn Pinterest Email

    ರಾಜ್ಯ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಅಂಗೀಕೃತಗೊಂಡಿದ್ದ, ದ್ವೇಷ ಭಾಷಣ ಮಸೂದೆಗೆ ಸಂಬಂಧಿಸಿದಂತೆ, ರಾಜ್ಯಪಾಲರು ಸಹಿ ನಿರಾಕರಿಸಿದ್ದು, ಇದೀಗ ರಾಷ್ಟ್ರಪತಿಗಳಿಗೆ ವರ್ಗಾವಣೆಯಾಗಿದೆ. ಈ ಮಸೂದೆ ವಿರುದ್ಧ ಈಗಾಗಲೇ 40ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿರುವುದು ಗಮನಾರ್ಹವಾಗಿದ್ದು. ದ್ವೇಷ ಭಾಷಣದ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ. ಈ ಅಸ್ಪಷ್ಟತೆಯಿಂದಾಗಿ ಧರ್ಮ, ಜಾತಿ, ಜನಾಂಗ, ವ್ಯಕ್ತಿಗಳ ಮೇಲೆ ಪೂರ್ವಾಗ್ರಹದಿಂದ, ಕ್ರಮ ಜರುಗುವ ಸಾಧ್ಯತೆಯನ್ನು ಹೆಚ್ಚಿಸಲಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಮಸೂದೆಯನ್ನು ಉಭಯ ಸದನಗಳಲ್ಲಿ ಅರ್ಥಪೂರ್ಣ ಮತ್ತು ಸಮಗ್ರ ಚರ್ಚೆಗೆ ಒಳಪಡಿಸದೇ ಅಂಗೀಕರಿಸಲಾಗಿದೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದಾರೆ. ಇದರ ಪರಿಣಾಮವಾಗಿ ಸಂವಿಧಾನಾತ್ಮಕವಾಗಿ ಸಂರಕ್ಷಿತ ಪ್ರಜಾಪ್ರಭುತ್ವದ ಚರ್ಚೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗಂಭೀರ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

    Share. Facebook Twitter Pinterest LinkedIn Tumblr Telegram Email
    Previous ArticleEurozone: Digital Euro Could Boost Single Currency’s International Use
    yogeesh

    Add A Comment
    Leave A Reply Cancel Reply

    © 2026 BB News kannada. Designed by Cryptical Software.

    Type above and press Enter to search. Press Esc to cancel.